SSLC ಮತ್ತು PUC ಪಾಸ್ ಮಹಿಳೆಯರಿಗೆ ಇದು ದೊಡ್ಡ ಅವಕಾಶ

SSLC ಮತ್ತು PUC ಪಾಸ್ ಮಹಿಳೆಯರಿಗೆ ಇದು ದೊಡ್ಡ ಅವಕಾಶ

ಮೈಸೂರು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD) ವತಿಯಿಂದ 241 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. SSLC ಮತ್ತು PUC ಪಾಸ್ ಮಹಿಳೆಯರು ಜೂನ್ 20, 2026ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ವಿಶೇಷವಾಗಿ ಮಹಿಳೆಯರು ತಮ್ಮ ಕುಟುಂಬದ ಜವಾಬ್ದಾರಿಗಳ ಜೊತೆಗೆ ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎಂದು ಬಯಸುತ್ತಿದ್ದಾರೆ. ಹಲವಾರು ಮಹಿಳೆಯರು ಓದು ಮುಗಿಸಿದ ನಂತರ ತಮ್ಮ ಊರಲ್ಲೇ ಒಳ್ಳೆಯ ಕೆಲಸ ಸಿಗಲಿ ಎಂದು ಕಾಯುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಮೈಸೂರು ಜಿಲ್ಲೆಯ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ದೊಡ್ಡ ಅವಕಾಶ ಬಂದಿದೆ.

ಮೈಸೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಒಟ್ಟು 241 ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳನ್ನು ಭರ್ತಿ ಮಾಡಲು ಇಲಾಖೆ ಅಧಿಸೂಚನೆ ಪ್ರಕಟಿಸಿದೆ. SSLC ಮತ್ತು PUC ಪಾಸ್ ಮಹಿಳೆಯರಿಗೆ ಇದು ಉತ್ತಮ ಅವಕಾಶವಾಗಿದೆ. ಅದರಲ್ಲೂ ತಮ್ಮೂರಿನಲ್ಲೇ ಕೆಲಸ ಮಾಡುವ ಅವಕಾಶ ದೊರೆಯುತ್ತಿರುವುದು ಅನೇಕ ಮಹಿಳೆಯರಿಗೆ ಸಂತಸದ ವಿಷಯವಾಗಿದೆ.

ಈ ನೇಮಕಾತಿ ಮೈಸೂರು ಜಿಲ್ಲೆಯ 9 ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ನಡೆಯುತ್ತಿದೆ. ಗ್ರಾಮೀಣ ಮತ್ತು ನಗರ ಭಾಗದ ಮಹಿಳೆಯರು ಎರಡೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಮಹಿಳಾ ಲಿಂಗತ್ವ ಅಲ್ಪಸಂಖ್ಯಾತರಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು PUC ಪಾಸ್ ಆಗಿರಬೇಕು. ಜೊತೆಗೆ SSLCನಲ್ಲಿ ಕನ್ನಡ ಭಾಷೆಯನ್ನು ಮೊದಲ ಅಥವಾ ಎರಡನೇ ಭಾಷೆಯಾಗಿ ಓದಿರಬೇಕು. ಅಂಗನವಾಡಿ ಸಹಾಯಕಿ ಹುದ್ದೆಗೆ SSLC ಪಾಸ್ ಆಗಿದ್ದರೆ ಸಾಕು. ಇದರಿಂದ ಹೆಚ್ಚು ವಿದ್ಯಾಭ್ಯಾಸ ಮಾಡದ ಮಹಿಳೆಯರಿಗೂ ಉದ್ಯೋಗ ಅವಕಾಶ ಸಿಗುತ್ತಿದೆ,ಕೆಲವು ಮಹಿಳೆಯರು ಕುಟುಂಬದ ಕಾರಣದಿಂದ ಹೆಚ್ಚಿನ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗುವುದಿಲ್ಲ. ಆದರೆ ಅವರಿಗೆ ಕೆಲಸ ಮಾಡುವ ಆಸೆ ಇರುತ್ತದೆ. ಇಂತಹ ಮಹಿಳೆಯರಿಗೆ ಅಂಗನವಾಡಿ ಹುದ್ದೆಗಳು ಉತ್ತಮ ಅವಕಾಶವಾಗಿವೆ.

ಅಂಗನವಾಡಿ ಕೆಲಸ ಕೇವಲ ಉದ್ಯೋಗ ಮಾತ್ರವಲ್ಲ, ಇದು ಸಮಾಜ ಸೇವೆಯೂ ಆಗಿದೆ. ಮಕ್ಕಳ ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಶಿಕ್ಷಣದ ಕಡೆ ಗಮನ ಹರಿಸುವ ಮಹತ್ವದ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತೆಯರದ್ದು. ಚಿಕ್ಕ ಮಕ್ಕಳ ಭವಿಷ್ಯ ರೂಪಿಸುವ ಕೆಲಸದಲ್ಲಿ ಭಾಗಿಯಾಗುವುದು ತುಂಬಾ ಗೌರವದ ವಿಷಯವಾಗಿದೆ.

ಈ ಹುದ್ದೆಗಳ ಮತ್ತೊಂದು ವಿಶೇಷತೆ ಎಂದರೆ ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ಮೆರಿಟ್ ಆಧಾರದ ಮೇಲೆ ಆಯ್ಕೆ ನಡೆಯಲಿದೆ. ಇದರಿಂದ ಅನೇಕ ಮಹಿಳೆಯರಿಗೆ ಪರೀಕ್ಷೆಯ ಒತ್ತಡವಿಲ್ಲದೆ ಉದ್ಯೋಗ ಪಡೆಯುವ ಅವಕಾಶ ಸಿಗುತ್ತಿದೆ. SSLC ಮತ್ತು PUC ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ಗೌರವ ಧನವೂ ಲಭ್ಯವಾಗಲಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೆ ₹11,500 ರಿಂದ ₹14,000ರವರೆಗೆ ಮತ್ತು ಸಹಾಯಕಿಯರಿಗೆ ₹6,500 ರಿಂದ ₹8,000ರವರೆಗೆ ಗೌರವ ಧನ ದೊರೆಯಲಿದೆ. ಇದರ ಜೊತೆಗೆ ಇನ್ನೂ ಹಲವು ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ,ಪ್ರತಿ ವರ್ಷ ಎರಡು ಸೀರೆಗಳನ್ನು ನೀಡಲಾಗುತ್ತದೆ. ಮಹಿಳೆಯರಿಗೆ 6 ತಿಂಗಳ ಹೆರಿಗೆ ರಜೆ ಸೌಲಭ್ಯವೂ ಲಭ್ಯವಿದೆ. ನಿವೃತ್ತಿಯ ನಂತರ ಗ್ರಾಚ್ಯುಯಿಟಿ ಹಣ ದೊರೆಯುತ್ತದೆ. ಜೊತೆಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ವೈದ್ಯಕೀಯ ಚಿಕಿತ್ಸೆಯ ಸೌಲಭ್ಯವೂ ಸಿಗಲಿದೆ. ಇದು ಮಹಿಳೆಯರ ಭದ್ರ ಭವಿಷ್ಯಕ್ಕೆ ಸಹಾಯ ಮಾಡುತ್ತದೆ.

ಒಟ್ಟು 241 ಹುದ್ದೆಗಳ ಭರ್ತಿ
ಮೈಸೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಒಟ್ಟು 241 ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳನ್ನು ಭರ್ತಿ ಮಾಡಲು ಇಲಾಖೆ ಅಧಿಸೂಚನೆ ಪ್ರಕಟಿಸಿದೆ.
ಈ ನೇಮಕಾತಿ ಮೈಸೂರು ಜಿಲ್ಲೆಯ 9 ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ನಡೆಯಲಿದೆ.
ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರು ಎರಡೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಅಂಗನವಾಡಿ ಕಾರ್ಯಕರ್ತೆಯರು:
ಮಕ್ಕಳ ಆರೋಗ್ಯದ ಕಡೆ ಗಮನ ಕೊಡುತ್ತಾರೆ
ಪೌಷ್ಟಿಕ ಆಹಾರ ವಿತರಣೆ ಮಾಡುತ್ತಾರೆ
ಮಕ್ಕಳ ಶಿಕ್ಷಣ ಮತ್ತು ಬೆಳವಣಿಗೆಗೆ ಸಹಾಯ ಮಾಡುತ್ತಾರೆ
ಗರ್ಭಿಣಿಯರು ಮತ್ತು ಮಹಿಳೆಯರಿಗೆ ಮಾರ್ಗದರ್ಶನ ನೀಡುತ್ತಾರೆ
ಹೀಗಾಗಿ ಈ ಕೆಲಸ ಸಮಾಜ ಸೇವೆಯ ಜೊತೆಗೆ ಗೌರವಯುತ ಉದ್ಯೋಗವೂ ಆಗಿದೆ.

ಯಾವ ಹುದ್ದೆಗೆ ಯಾವ ವಿದ್ಯಾರ್ಹತೆ?
ಅಂಗನವಾಡಿ ಕಾರ್ಯಕರ್ತೆ
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು PUC ಪಾಸ್ ಆಗಿರಬೇಕು.
ಜೊತೆಗೆ SSLCನಲ್ಲಿ ಕನ್ನಡ ಭಾಷೆಯನ್ನು ಮೊದಲ ಅಥವಾ ಎರಡನೇ ಭಾಷೆಯಾಗಿ ಓದಿರಬೇಕು.

ಅಂಗನವಾಡಿ ಸಹಾಯಕಿ
ಈ ಹುದ್ದೆಗೆ SSLC ಪಾಸ್ ಆಗಿದ್ದರೆ ಸಾಕು.
ಇದರಿಂದ ಹೆಚ್ಚು ವಿದ್ಯಾಭ್ಯಾಸ ಮಾಡದ ಮಹಿಳೆಯರಿಗೂ ಉದ್ಯೋಗ ಅವಕಾಶ ಸಿಗುತ್ತಿದೆ.

ಯಾವುದೇ ಲಿಖಿತ ಪರೀಕ್ಷೆ ಇಲ್ಲ
ಈ ನೇಮಕಾತಿಯ ಅತ್ಯಂತ ದೊಡ್ಡ ವಿಶೇಷತೆ ಎಂದರೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ,ಅಭ್ಯರ್ಥಿಗಳನ್ನು ಅವರ ವಿದ್ಯಾರ್ಹತೆ ಮತ್ತು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ,ಇದು ಅನೇಕ ಮಹಿಳೆಯರಿಗೆ ದೊಡ್ಡ ಅನುಕೂಲವಾಗಿದೆ,ಯಾಕೆಂದರೆ ಹಲವರು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಭಯ ಹೊಂದಿರುತ್ತಾರೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ಗೌರವ ಧನ ನೀಡಲಾಗುತ್ತದೆ.
ಕಾರ್ಯಕರ್ತೆಯರಿಗೆ:
11,500 ರಿಂದ ₹14,000ವರೆಗೆ

ಸಹಾಯಕಿಯರಿಗೆ
6,500 ರಿಂದ ₹8,000ವರೆಗೆ
ಇದರ ಜೊತೆಗೆ ಸರ್ಕಾರ ಹಲವು ಸೌಲಭ್ಯಗಳನ್ನು ನೀಡುತ್ತಿದೆ.

ಮಹಿಳೆಯರಿಗೆ ಸಿಗುವ ಹೆಚ್ಚುವರಿ ಸೌಲಭ್ಯಗಳು
ಈ ಹುದ್ದೆಗಳ ಮೂಲಕ ಮಹಿಳೆಯರಿಗೆ ಕೇವಲ ಸಂಬಳ ಮಾತ್ರವಲ್ಲ, ಇನ್ನೂ ಹಲವು ಸೌಲಭ್ಯಗಳು ಸಿಗಲಿವೆ.
ಅವುಗಳಲ್ಲಿ ಪ್ರಮುಖವಾಗಿ:
ವರ್ಷಕ್ಕೆ 2 ಸೀರೆ
6 ತಿಂಗಳ ಹೆರಿಗೆ ರಜೆ
ಗ್ರಾಚ್ಯುಯಿಟಿ ಸೌಲಭ್ಯ
ಆಯುಷ್ಮಾನ್ ಭಾರತ್ ಆರೋಗ್ಯ ಸೌಲಭ್ಯ ಇವು ಮಹಿಳೆಯರ ಭದ್ರ ಭವಿಷ್ಯಕ್ಕೆ ಸಹಾಯಕವಾಗುತ್ತವೆ.

ಈ ಅವಕಾಶದ ಮೂಲಕ ತಮ್ಮ ತಾಲೂಕಿನಲ್ಲೇ ಕೆಲಸ ಮಾಡಬಹುದು.
ಇದು ವಿಶೇಷವಾಗಿ:
ಮಹಿಳೆಯರಿಗೆ
ಗ್ರಾಮೀಣ ಭಾಗದ ಮಹಿಳೆಯರಿಗೆ
ಆರ್ಥಿಕವಾಗಿ ಸ್ವಾವಲಂಬಿಯಾಗಲು ಬಯಸುವವರಿಗೆ ತುಂಬಾ ಉತ್ತಮ ಅವಕಾಶವಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
ಅಭ್ಯರ್ಥಿಗಳು ಕೆಳಗಿನ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು:
SSLC / PUC Marks Card
Aadhaar Card
Caste Certificate
Address Proof
Passport Size Photo

ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಪ್ರಕ್ರಿಯೆ ಸಂಪೂರ್ಣ ಆಫ್‌ಲೈನ್ ಆಗಿದೆ.
ಅಭ್ಯರ್ಥಿಗಳು ತಮ್ಮ ತಾಲೂಕಿನ CDPO ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.
ಜೂನ್ 20, 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಕೊನೆಯ ದಿನದವರೆಗೆ ಕಾಯದೆ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಉತ್ತಮ.

ಒಂದು ಕಾಲದಲ್ಲಿ ಮಹಿಳೆಯರಿಗೆ ಉದ್ಯೋಗ ಅವಕಾಶಗಳು ಕಡಿಮೆಯಾಗಿದ್ದವು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಅನೇಕ ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆದು ತಮ್ಮ ಕನಸಿನ ಉದ್ಯೋಗ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ತಮ್ಮ ಕಾಲಿನ ಮೇಲೆ ತಾವೇ ನಿಲ್ಲಬೇಕು, ಕುಟುಂಬಕ್ಕೆ ಸಹಾಯ ಮಾಡಬೇಕು ಮತ್ತು ಜೀವನದಲ್ಲಿ ಸ್ವಂತ ಗುರುತು ಮೂಡಿಸಬೇಕು ಎಂಬ ಆಸೆ ಬಹಳಷ್ಟು ಮಹಿಳೆಯರಲ್ಲಿ ಹೆಚ್ಚಾಗಿದೆ,
ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳೆಯರು ಕೂಡ ಈಗ ಉದ್ಯೋಗದ ಕಡೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ,ಇಂತಹ ಸರ್ಕಾರಿ ಉದ್ಯೋಗ ಅವಕಾಶಗಳು ಮಹಿಳೆಯರ ಜೀವನದಲ್ಲಿ ದೊಡ್ಡ ಬದಲಾವಣೆ ತರಬಹುದು,ಇಂತಹ ಸಂದರ್ಭದಲ್ಲಿ ಬಂದಿರುವ ಈ ನೇಮಕಾತಿ ನಿಜವಾಗಿಯೂ ಒಳ್ಳೆಯ ಅವಕಾಶವಾಗಿದೆ. SSLC, PUC ಅಥವಾ Degree ಮುಗಿಸಿ ಉದ್ಯೋಗ ಹುಡುಕುತ್ತಿರುವ ಮಹಿಳೆಯರಿಗೆ ಇದು ಹೊಸ ಭವಿಷ್ಯದ ದಾರಿ ಆಗಬಹುದು.

ವಿಶೇಷವಾಗಿ ತಮ್ಮೂರಿನಲ್ಲೇ ಕೆಲಸ ಮಾಡುವ ಅವಕಾಶ ಸಿಗುತ್ತಿರುವುದು ಇನ್ನೂ ದೊಡ್ಡ ವಿಶೇಷತೆ. ಇದರಿಂದ ಕುಟುಂಬದ ಜೊತೆ ಇದ್ದುಕೊಂಡೇ ಕೆಲಸ ಮಾಡಬಹುದು. ಮಹಿಳೆಯರು, students ಎಲ್ಲರಿಗೂ ಇದು ಉಪಯುಕ್ತ ಅವಕಾಶವಾಗಿದೆ,ಈ ರೀತಿಯ ಉದ್ಯೋಗಗಳು ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತವೆ. ಸಮಾಜದಲ್ಲಿ ಗೌರವ ದೊರೆಯುತ್ತದೆ. ಜೊತೆಗೆ ಆರ್ಥಿಕ ಸ್ವಾವಲಂಬನೆಗೂ ಸಹಾಯ ಮಾಡುತ್ತವೆ.

Leave a Comment